ಸಾಹಿತ್ಯ ನಾವಿಕ- ಸ್ವರಚಿತ ಕವನ ಸ್ಪರ್ಧೆ

lipikar.png

ನಮ್ಮೆಲ್ಲರಿಗೂ  ಭಾಷೆ  ಎನ್ನುವುದು ಕೇವಲ  ಒಂದು ಸಂವಹನದ ಮಾಧ್ಯಮವಷ್ಟೇ ಅಲ್ಲ. ಅದೊಂದು ಸಂಸ್ಕೃತಿ , ಜೀವನ ಶೈಲಿ ಮತ್ತು ಬಾಂಧವ್ಯದ ಬೆಸುಗೆ. ಹೃದಯ ಹೃದಯಗಳ ನಡುವೆ ಈ  ಬಾಂಧವ್ಯ ಗಟ್ಟಿಗೊಂಡರೆ ಬದುಕಿನ ಬಗ್ಗೆ ಅದ್ಭುತವಾದ ಭರವಸೆ ಮೂಡುತ್ತದೆ. ಅದು ಸಾಧನೆಗೆ ನಾಂದಿ ಹಾಡುತ್ತದೆ. ಹಾಗಾಗಿ ಭಾಷೆಯಿಂದ ಬಾಂಧವ್ಯ. ಬಾಂಧವ್ಯದಿಂದ ಭರವಸೆ, ಭರವಸೆಯಿಂದ ಬದುಕು. ಇದುವೇ ಈ ಬಾರಿಯ ನಾವಿಕ  ವಿಶ್ವ ಕನ್ನಡ ಸಮ್ಮೇಳನದ ಆಶಯ.

ಈ ಆಶಯವನ್ನು ಬಿಂಬಿಸುವ ಕವನಗಳನ್ನು ನಿಮ್ಮಿಂದ  ಆಹ್ವಾನಿಸುತ್ತಿದ್ದೇವೆ.

ನಿಯಮಗಳು:  

  • ಕವನ ಸ್ವಂತದ್ದಾಗಿರಬೇಕು

  • ಕನ್ನಡದಲ್ಲಿರಬೇಕು.

  • ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.

  • ತೀರ್ಪುಗಾರರು ಆಯ್ಕೆ ಮಾಡಿದ ಕವನಗಳಿಗೆ ಬಹುಮಾನ ನೀಡಲಾಗುವುದು.

ಈ ಸ್ಪರ್ಧೆಗೆ ಬಂದ ಆಯ್ದ ಕವನಗಳನ್ನು ‘ನಾವಿಕ’ದ ‘ಭಾವಧಾರೆ’  ಸ್ವರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ಕೊನೆಯ ದಿನಾಂಕ :  ಮೇ 31, 2021 

ಕವನ ಕಳಿಸಬೇಕಾದ ವಿಳಾಸ : NVKS.21.literary@gmail.com