ಸಾಹಿತ್ಯ ನಾವಿಕ - ಅನಿವಾಸಿ ರಸಾನುಭವ

lipikar.png

ಖಂಡಾಂತರಗಳನ್ನು ದಾಟಿ, ಹೊಸ ದೇಶಕ್ಕೆ ಬಂದಿಳಿದು, ಬದುಕು ಕಟ್ಟಿಕೊಂಡಿರುವ ಅನಿವಾಸಿ ಕನ್ನಡಿಗರ ನೆನಪಿನ ಬುತ್ತಿಯಲ್ಲಿರುವ ರಸಾನುಭವಗಳೇನು ಕಡಿಮೆಯೇ? ಅದನ್ನು ನೀವೇಕೆ ನಮ್ಮೊಂದಿಗೆ ಹಂಚಿಕೊಳ್ಳಬಾರದು?  ಈ ಅನುಭವ ಹಾಸ್ಯದಲ್ಲಿ ಮಿಂದಿದ್ದಾಗಿರಬಹುದು, ಫಜೀತಿಯಲ್ಲಿ ಸಿಕ್ಕಿದ್ದಾಗಿರಬಹುದು.  ಒಟ್ಟಿನಲ್ಲಿ ವೀಕ್ಷಕರ ಮನವನ್ನು ಸೆರೆಹಿಡಿಯುವಂತಿರಬೇಕು. ನಿಮ್ಮ ಮನಸ್ಸಿನಲ್ಲಿ ಸೆರೆಯಾಗಿರುವ ಇಂತಹ ಮರೆಯಲಾರದ ರಸಾನುಭವಗಳನ್ನು ವಿಡಿಯೊ ಮಾಡಿ, ಯುಟ್ಯೂಬ್ ಗೆ ಅಪ್ಲೋಡ್ ಮಾಡಿ, ನಮಗೆ ಲಿಂಕ್ ಕಳಿಸಬೇಕು. ನಿಮ್ಮ ಮಾತು ಕನ್ನಡದಲ್ಲಿರಲಿ. ಈ ವಿಡಿಯೊಗಳು, ಈ ಮೊದಲು  ಎಲ್ಲಿಯೂ ಹಂಚಿಕೆಯಾಗಿರಬಾರದು. ವಿಡಿಯೊ ಕಾಲಾವಧಿ 8.00 ನಿಮಿಷಗಳನ್ನು ಮೀರದಿರಲಿ.

ಆಯ್ಕೆಯಾದ ರಸಾನುಭವಗಳನ್ನು ಪೋಣಿಸಿ, ನಾವಿಕ 2021 ಸಮ್ಮೇಳನದಲ್ಲಿ ಬಿತ್ತರಿಸಿಲಾಗುವುದು.

ಯುಟ್ಯೂಬ್ ಲಿಂಕ್ ಕಳಿಸಬೇಕಾದ ವಿಳಾಸ :  NVKS.21.literary@gmail.com

ಕೊನೆಯ ದಿನಾಂಕ :  ಮೇ  31,2021